ಮಂಗಳೂರು: ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಸರಸ್ವತಿ ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ದಿನಾಂಕ 25ರ ಸೆಪ್ಟೆಂಬರ್ ಶನಿವಾರ ಕದ್ರಿಯ ಅಶೋಕ ಭವನದಲ್ಲಿ ಯಶಸ್ವಿಯಾಗಿ ಮಧುಮೇಹ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಲಯನ್ ಜಗದೀಶ ಪೈ ಇವರ ನೇತೃತ್ವದಲ್ಲಿ ನಡೆದ ಈ ಶಿಬಿರವು ಮಂಗಳೂರು ವೈದ್ಯ ಡಾ ಸುರೇಶ ನೆಗಳಗುಳಿ ಮತ್ತು ಡಾ ರೋಶನಿ ಮೊಂತೇರೋ ಇವರ ಸಾರಥ್ಯದಲ್ಲಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ನೂರಕ್ಕೂ ಮಿಕ್ಕಿ ಸದಸ್ಯರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಮಧುಮೇಹ ಸಾದ್ಯತೆ ಇದ್ದವರಿಗೆ ಚಿಕಿತ್ಸಾರ್ಥ ಸಲಹೆಗಳನ್ನು ಸಹ ಈ ಸಂದರ್ಭದಲ್ಲಿ ನೀಡಲಾಯಿತು.
ಲಯನ್ ಜಗದೀಶ ಪೈ ದಂಪತಿಗಳೂ, ಲಯನ್ ವಿಜಯ ಶೆಟ್ಟಿ ದಂಪತಿಗಳೂ ಲಯನ್ ಪ್ರವೀಣ್ ಶೆಟ್ಟಿ ದಂಪತಿಗಳೂ ಲಯನ್ ಸುಬ್ರಹ್ಮಣ್ಯ ಭಟ್ ದಂಪತಿಗಳೂ ಲಯನ್ ಕೇಶವ ಭಟ್ ದಂಪತಿಗಳೂ, ಲಯನ್ ಎನ್ ಟಿ ರಾಜಾ ದಂಪತಿಗಳೂ ಮತ್ತು ಲಯನ್ ಗೋವಿಂದ ಶರ್ಮಾಸಹಿತ ಇತರ ಎಲ್ಲಾ ಕಾರ್ಯಕಾರೀ ಸಮಿತಿಯ ಸದಸ್ಯರ ಸಹಕಾರದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಇದೇ ವೇಳೆ ಲಯನ್ ಡಾ ಸುರೇಶ ನೆಗಳಗುಳಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮಾಹಿತಿ: ಲಯನ್ ಡಾ ಸುರೇಶ ನೆಗಳಗುಳಿ
'ಸುಹಾಸ', ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ
ಮಂಗಳೂರು 575008
9448216674
negalagulis@gmail.com
Post a Comment