ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬಡಾವಣೆಗೆ ಆಗಮಿಸಿ ಬಸ್ ಸಂಚಾರವನ್ನು ಉದ್ಘಾಟಿಸಿದರು. ಆ ಮೂಲಕ ಬಸ್ ಸಂಚಾರಕ್ಕೆ ಕೊನೇ ಕ್ಷಣದಲ್ಲಿ ಒದಗಿದ್ದ ಆತಂಕವನ್ನು ದೂರ ಮಾಡಿದರು.
ಬದ್ಧತೆ ಪ್ರದರ್ಶಿಸಿದ ಶಾಸಕರನ್ನು ಸ್ಥಳೀಯ ನಿವಾಸಿಗಳು ಆಭಿನಂದಿಸಿದರು.
ಸರಕಾರಿ ಸಿಟಿ ಬಸ್ ಪ್ರಾಯೋಗಿಕ ಸಂಚಾರ ಸೋಮವಾರ ನಡೆದಿತ್ತು. ಬಳಿಕ ಮಂಗಳವಾರ ಅಧಿಕೃತ ಉದ್ಘಾಟನೆ ಎಂದು ತಿಳಿಸಲಾಗಿತ್ತು. ಆದರೆ ಮಂಗಳವಾರ ಅದು ನೆರವೇರಲಿಲ್ಲ. ಮತ್ತೆ ಬುಧವಾರ ಉದ್ಘಾಟನೆ ಎಂದು ಹೇಳಲಾಗಿತ್ತು. ಆದರೆ ಮಂಗಳವಾರ ಸಂಜೆಯ ಹೊತ್ತಿಗೆ ಕಾರ್ಮೋಡ ಕವಿಯಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಜನರ ಹಕ್ಕೊತ್ತಾಯವನ್ನು ಉಪಯುಕ್ತ ನ್ಯೂಸ್ ಪ್ರಕಟಿಸಿತ್ತು.
ಸುದ್ದಿ ಪ್ರಕಟವಾಗಿ ಸ್ವಲ್ಪ ಹೊತ್ತಿನಲ್ಲೇ ಬಸ್ ಉದ್ಘಾಟನೆ ನಡೆಯವುದು ಖಾತ್ರಿಯಾಗಿ ಅಧಿಕೃತ ಪ್ರಕಟಣೆ ಹೊರಬಿತ್ತು.
ಅದರಂತೆ ಇಂದು ಬೆಳಗ್ಗೆ ಶಾಸಕರು ಬಸ್ ಸಂಚಾರವನ್ನು ಉದ್ಘಾಟಿಸಿ ಬದ್ಧತೆ ಮೆರೆದಿರುವುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಬಸ್ಸಿನ ವೇಳಾಪಟ್ಟಿ:
ಲ್ಯಾಂಡ್‌ಲಿಂಕ್ಸ್ ಬಡಾವಣೆಯಿಂದ ಬಜಾಲ್ ಪಡ್ಪು ಕಡೆಗೆ ಪ್ರತಿದಿನ 15 ಟ್ರಿಪ್‌ಗಳು ಮತ್ತು ಬಜಾಲ್ ಪಡ್ಪುವಿನಿಂದ ಲ್ಯಾಂಡ್‌ಲಿಂಕ್ಸ್ ಕಡೆಗೆ ಪ್ರತಿದಿನ 13 ಟ್ರಿಪ್‌ಗಳನ್ನು ಓಡಾಟವನ್ನು ಈ ಎರಡು ಬಸ್‌ಗಳು ನಡೆಸಲಿವೆ. ಎರಡೂ ಕಡೆಯಿಂದ ಏಕಕಾಲಕ್ಕೆ ಹೊರಡುವ ಬಸ್‌ಗಳು ಪ್ರತಿ ಮುಕ್ಕಾಲು ಗಂಟೆಗೊಮ್ಮೆ ಆಯಾ ನಿಲ್ದಾಣದಿಂದ ಹೊರಡುತ್ತವೆ.
ಲ್ಯಾಂಡ್‌ಲಿಂಕ್ಸ್ ನಿಂದ ಹೊರಡುವ ಬಸ್‌ನ ವೇಳಾಪಟ್ಟಿ ಇಂತಿದೆ:
ಬೆಳಗ್ಗೆ 8:00 ಗಂಟೆಯಿಂದ ಮೊದಲ ಟ್ರಿಪ್ ಆರಂಭ. ಬಳಿಕ 8:45, 09:30, 10:15, 11:00, 11:45, 13:05, 13:50, 14:35, 15:20, 16:15, 17:00, 17:45, 18:45.
ಬಜಾಲ್ ಪಡ್ಪುವಿನಿಂದ ಬಸ್ ಹೊರಡುವ ಸಮಯ: 8:00, 8:45, 09:30, 10:15, 11:00, 11:45, 13:05, 13:50, 14:35, 15:20, 16:15, 17:00, 17:45, 18:45.
ಪ್ರಯಾಣಿಕರು ಈ ಬಸ್‌ಗಳ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡಬೇಕಿದೆ.
ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಈ ಬಸ್‌ಗಳು ಅನುಕೂಲಕರವಾಗಿವೆ. ನಗರದ ಪ್ರಮುಖ ಆಸ್ಪತ್ರೆಗಳಾದ ಎ.ಜೆ ಅಸ್ಪತ್ರೆ,. ಕೆಎಂಸಿ (ಜ್ಯೋತಿ), ಫಾದರ್ ಮುಲ್ಲರ್ಸ್, ಇಂಡಿಯಾನಾ ಆಸ್ಪತ್ರೆಗಳನ್ನು ಈ ಬಸ್ ಸಂಪರ್ಕ ಜೋಡಿಸುತ್ತದೆ. ಅಲ್ಲದೆ ಕೆನರಾ ಶಾಲೆ-ಕಾಲೇಜು, ಶಾರದಾ ವಿದ್ಯಾಲಯದಂತಹ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಈ ಬಸ್‌ಗಳು ಅನುಕೂಲಕರವಾಗಿವೆ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯವೂ ಇದ್ದು, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ನಾಗರಿಕರ ಕೈಯ್ಯಲ್ಲಿದೆ.
Post a Comment