ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟೋಲ್ ಗೇಟ್ ಸಿಬ್ಬಂದಿ ಯಿಂದ ಇಬ್ಬರು ವಾಹನ ಸವಾರರಿಗೆ ತೀವ್ರ ಹಲ್ಲೆ

ಟೋಲ್ ಗೇಟ್ ಸಿಬ್ಬಂದಿ ಯಿಂದ ಇಬ್ಬರು ವಾಹನ ಸವಾರರಿಗೆ ತೀವ್ರ ಹಲ್ಲೆ

 


ಚಿತ್ರದುರ್ಗ: ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಜಗಳ ಮಾಡಿ ಇಬ್ಬರು ವಾಹನ ಸವಾರರ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆಯೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.


ಟೋಲ್ ಗೇಟ್ ನಲ್ಲಿ ವಾಹನ ಬಿಡುಗಡೆ ಮಾಡಲು ತಡ ಮಾಡಿದ ಕಾರಣ ವಾಹನ ಸವಾರರು, ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.


ಈ ವೇಳೆ ಟೋಲ್ ಗೇಟ್ ಸಿಬ್ಬಂದಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಳ್ಳಕೆರೆಯ ಶಿವರಾಜು, ರಾಜೇಶ್ ಗೆ ಗಾಯಗಳಾಗಿವೆ.


ಗಾಯಾಳುಗಳನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

0 Comments

Post a Comment

Post a Comment (0)

Previous Post Next Post