ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟೈರ್ ಸ್ಫೋಟಗೊಂಡು ಟಾಟಾ ಸುಮೊ ಪಲ್ಟಿ; ಇಬ್ಬರು ಸಾವು,ಹಲವರಿಗೆ ಗಾಯ

ಟೈರ್ ಸ್ಫೋಟಗೊಂಡು ಟಾಟಾ ಸುಮೊ ಪಲ್ಟಿ; ಇಬ್ಬರು ಸಾವು,ಹಲವರಿಗೆ ಗಾಯ

 


ನೆಲಮಂಗಲ: ಟೈರ್ ಸ್ಫೋಟಗೊಂಡು ಟಾಟಾ ಸುಮೊ ಪಲ್ಟಿಯಾದ ಪರಿಣಾಮ ತಾತ ಮತ್ತು ಮೊಮ್ಮಗ ಸಾವನ್ನಪ್ಪಿದ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಫ್ಲೈಓವರ್​ನಲ್ಲಿ ನಡೆದಿದೆ.


ಮೊಹಮ್ಮದ್ ಸಾಬ್ (65)ವರ್ಷ, ಯೂಸುಫ್ (7)ವರ್ಷ ಮೃತಪಟ್ಟ ದುರ್ದೈವಿಗಳು. ದುರ್ಘಟನೆಯಲ್ಲಿ 13 ಜನರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 


ಟಾಟಾ ಸುಮೋ ಬೆಂಗಳೂರಿನಿಂದ ಕೊಪ್ಪಳಕ್ಕೆ ತೆರಳುತ್ತಿತ್ತು. ಈ ವೇಳೆಯಲ್ಲಿ ಅಪಘಾತ ಸಂಭವಿಸಿದೆ. 


ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

0 Comments

Post a Comment

Post a Comment (0)

Previous Post Next Post