ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಕ್ಷಮ ದ.ಕ ಜಿಲ್ಲಾ ಘಟಕದಿಂದ ರೇಶನ್ ಕಿಟ್ ವಿತರಣೆ

ಸಕ್ಷಮ ದ.ಕ ಜಿಲ್ಲಾ ಘಟಕದಿಂದ ರೇಶನ್ ಕಿಟ್ ವಿತರಣೆ


 

ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಇಂದು ಸುರತ್ಕಲ್‌ನ ಕೇಶವ ಶಿಶುಮಂದಿರದಲ್ಲಿ ರೇಷನ್ ಕಿಟ್ ವಿತರಣೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಮುರಳಿಧರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.


ಸಕ್ಷಮ ಕರ್ನಾಟಕದ ಕೋಶಾಧಿಕಾರಿ ಜಯದೇವ ಕಾಮತ್ ಅವರು ಉಪಸ್ಥಿತರಿದ್ದರು. ದಕ್ಷಿಣ ಜಿಲ್ಲಾ ಘಟಕದ ಉಪಾಧ್ಯಕ್ಷರು ಶ್ರೀ ಕೃಷ್ಣ ಪೂಜಾರಿ ಹಾಗೂ ರಾಜಶೇಖರ್ ಭಟ್, ಹರೀಶ್ ಪ್ರಭು ಉಪಸ್ಥಿತರಿದ್ದರು.


ಸಕ್ಷಮ ವಿಶೇಷ ಚೇತನರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಕ್ಷಮ ಎಲ್ಲಾತರದ ದಿವ್ಯಾಂಗರ ಸಬಲೀಕರಣಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಏಕಮಾತ್ರ ಸ್ವಯಂಸೇವಾ ಸಂಸ್ಥೆ. 2008 ರಲ್ಲಿ ಪ್ರಾರಂಭವಾಗಿ ದೃಷ್ಟಿದೋಷ, ಬುದ್ಧಿಮಾಂದ್ಯತೆ, ಮೂಳೆ ತೊಂದರೆ, ಶ್ರವಣದೋಷ, ಉಳ್ಳವರ ಪ್ರಕೋಷ್ಠ ಗಳ ಮೂಲಕ ದಿವ್ಯಾಂಗ ರನ್ನು ಅಖಿಲ ಭಾರತ ಮಟ್ಟದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತೆ ರೂಪಿಸುವುದು ಸಕ್ಷಮದ ಉದ್ದೇಶ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post