ಕಾಸರಗೋಡು: ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್ 10ರಂದು ಸ್ಥಳೀಯ ರಜೆ ಎಂದು ಕಾಸರಗೋಡು ಜಿಲ್ಲಾಡಳಿತ ಘೋಷಿಸಿದೆ.
10/09/2021ರ ಶುಕ್ರವಾರದಂದು ನಾಡಿನಾದ್ಯಂತ ಗಣೇಶೋತ್ಸವ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಜೆ ಘೋಷಿಸುವಂತೆ ಕಾಸರಗೋಡಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಅದರನ್ವಯ ಜಿಲ್ಲಾಡಳಿತವು ಸರಕಾರಿ ನಿಯಮಾನುಸಾರ ತನಗಿರುವ ಅಧಿಕಾರ ಬಳಸಿಕೊಂಡು ರಜೆ ಘೋಷಿಸಿದೆ.
ಅಂದು ಹಬ್ಬದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಸೂಚಿಸಿ ಸರಕಾರದ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು, ಎಲ್ಲ ಕಂದಾಯ ಕಚೇರಿಗಳು, ಕಾಸರಗೋಡಿನ ಡಿಡಿಪಿಐ ಕಚೇರಿ, ಜಿಲ್ಲಾಡಳಿತದ ಎಲ್ಲ ಇಲಾಖೆಗಳ ಮುಖ್ಯಸ್ಥರ ಕಚೇರಿಗಳು, ಎಲ್ಲ ಶಾಲಾ ಕಾಲೇಜುಗಳ ಪ್ರಿನ್ಸಿಪಾಲರು, ಆರ್‌ಟಿಓ, ಕೆಎಸ್ಸಾರ್ಟಿಸಿ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ಕೋರ್ಟಿನ ಶಿರಸ್ತೇದಾರರು, ಕಾಸರಗೋಡಿನ ಜಿಲ್ಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಸುತ್ತೋಲೆಯ ಪ್ರತಿಗಳನ್ನು ರವಾನಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment