ಬದಿಯಡ್ಕ: ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಬಿ. ಸುಬ್ರಾಯ ಭಟ್ ಬೊಳುಂಬು (ನೀರ್ಚಾಲು) ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಬಡಕುಟುಂಬದವರಾದ ಅವರು ಸಣ್ಣ ಪುಟ್ಟ ಅಡುಗೆ ಕೆಲಸಗಳನ್ನು ನಿರ್ವಹಿಸುತ್ತ ಜೀವನ ಸಾಗಿಸುತ್ತಿದ್ದರು. ಅಪಘಾತಕ್ಕೀಡಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಾಗ ಕುಟುಂಬದವರು ಆರ್ಥಿಕ ನೆರವಿಗಾಗಿ ಸಹೃದಯ ಸಾರ್ವಜನಿಕರ ನೆರವು ಯಾಚಿಸಿದ್ದರು.
ಅವರ ಕೋರಿಕೆಗೆ ಸ್ಪಂದಿಸಿದ ಹಲವು ಮಂದಿ ತಮ್ಮ ಕೈಲಾದಷ್ಟು ನೆರವನ್ನೂ ನೀಡಿದ್ದರು. ಇಷ್ಟಾದರೂ ಗಾಯಾಳು ಚೇತರಿಸಿಕೊಳ್ಳದೆ ಮೃತಪಟ್ಟರು.
ಈ ಸಂದರ್ಭದಲ್ಲಿ ನೆರವಾದ ಎಲ್ಲ ಸಹೃದಯ ಬಂಧುಗಳಿಗೆ ಸುಬ್ರಾಯ ಭಟ್ಟರ ಪುತ್ರ ಶೈಲೇಶ್ ಭಟ್, ಕುಟುಂಬದ ಇತರ ಸದಸ್ಯರು, ಬಂಧುಗಳು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment