ಪುತ್ತೂರು : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬರನ್ನು ಯಾವುದೇ ಝೀರೋ ಟ್ರಾಫಿಕ್ ಇಲ್ಲದೆ ಇಂಡಿಕೇಟರ್ ಹಾಕುವ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸುಮಾರು 19 ಕಿ.ಮೀ. ದೂರವನ್ನು ಕೇವಲ 8.5 ನಿಮಿಷದಲ್ಲಿ ತಲುಪಿಸಿದ ಮಾಣಿಯ ಯುವಕ ಮಂಡಲ ಸದಸ್ಯರೂ ಆಗಿರುವ ಯುವ ಕಾಂಗ್ರೆಸ್ ವಲಯಾಧ್ಯಕ್ಷ ವಿಕೇಶ್ ಶೆಟ್ಟಿ ಅವರು ಸಹಕರಿಸಿದರು.
ಗುರುವಾರ ರಾತ್ರಿ ಮಾಣಿ ಸಮೀಪ ಬುಡೋಳಿಯ ಯುವತಿಯೊಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆ್ಯಂಬುಲೆನ್ಸ್‌ಗಾಗಿ ಸಂಬಂಧಪಟ್ಟವರು ಕರೆ ಮಾಡುತ್ತಿದ್ದಾಗ, ವಿಕೇಶ್ ಶೆಟ್ಟಿ ಅವರ ಗಮನಕ್ಕೆ ವಿಷಯ ತಿಳಿದು ಬಂದಿತು.
ಈ ವೇಳೆಯಲ್ಲಿ ಅವರು ತನ್ನ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಯುವತಿ ಹಾಗೂ ಅವರ ಸಂಬಂಧಿಕರನ್ನು ಕರೆದುಕೊಂಡು ರಾತ್ರಿ ಸುಮಾರು 8.30 ರ ವೇಳೆಗೆ ಬುಡೋಳಿಯಿಂದ ಮಾಣಿಗೆ ಬಂದು ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ತಲುಪಿಸಿರುವುದಾಗಿ ವಿಕೇಶ್ ಶೆಟ್ಟಿ ಅವರು ಮಾಹಿತಿ ತಿಳಿಸಿದ್ದಾರೆ.
Post a Comment