ಹೆಬ್ರಿ : ಆಗುಂಬೆ ಘಾಟಿಯ ಏಳನೇ ಸುತ್ತಿನಲ್ಲಿ ಕಂಟೈನರ್ ಲಾರಿಯೊಂದು ಬ್ರೇಕ್ ಫೇಲಾಗಿ ರಸ್ತೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನಿಂತ ಘಟನೆಯೊಂದು ಸೋಮವಾರ ಅಪರಾಹ್ನ ನಡೆದಿದೆ.
ಮಂಗಳವಾರ ಎರಡು ಕ್ರೇನ್‌ಗಳ ಮೂಲಕ ಅದನ್ನು ಮೇಲಕ್ಕೆತ್ತಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಸರಕುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯ ಬ್ರೇಕ್‌ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಘಾಟಿಯ ಏಳನೇ ತಿರುವಿನಲ್ಲಿ ರಸ್ತೆಯ ತಡೆಗೋಡೆಗೆ ಗುದ್ದಿದೆ.
ಲಾರಿಯಲ್ಲಿ ಚಾಲಕ ಒಬ್ಬನೇ ಇದ್ದನೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ತರಿಸಿ ಅವುಗಳ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment