ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇದು ಶ್ರೀ ಗುರುರಾಯರ ಅಪೂರ್ವ ಅತೀ ವಿರಳ ಮೃತ್ತಿಕಾ ವೃಂದಾವನ ಸನ್ನಿಧಿ

ಇದು ಶ್ರೀ ಗುರುರಾಯರ ಅಪೂರ್ವ ಅತೀ ವಿರಳ ಮೃತ್ತಿಕಾ ವೃಂದಾವನ ಸನ್ನಿಧಿ


ಉಡುಪಿ: ಮುಂಭಾಗದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಉಳಿದ ಮೂರು ಪಾರ್ಶ್ವಗಳಲ್ಲಿ ಶ್ರೀ ರಾಮ ಶ್ರೀ ಕೃಷ್ಣ ಶ್ರೀ ವೇದವ್ಯಾಸರ ಸುಂದರ ಬಿಂಬಗಳ ಕೆತ್ತನೆಗಳನ್ನೊಳಗೊಂಡ ಪ್ರಾಯಃ ಅಪುರೂಪದಲ್ಲಿ ಅಪರೂಪ ಅತೀ ವಿರಳ ಎನ್ನಬಹುದಾದ  ಶಿಲಾ ವೃಂದಾವನ ಇದು.


ಜಗತ್ಪ್ರಸಿದ್ಧ, ಬಹುಶ್ರುತ ವಿದ್ವಾಂಸ ವಿದ್ಯಾವಾಚಸ್ಪತಿ ಪದ್ಮಶ್ರೀ ಪುರಸ್ಕೃತ ಡಾ ಬನ್ನಂಜೆ ಗೋವಾಂದಾಚಾರ್ಯರ ಸ್ವಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಮ್ ಆವರಣದಲ್ಲಿ ಶ್ರೀಯುತ ಆಚಾರ್ಯರು ಹುಟ್ಟಿದ ವರ್ಷವೇ ಅವರ ಹಿರಿಯರು ಪ್ರತಿಷ್ಠಾಪಿಸಿದ ಶ್ರೀ ಗುರುರಾಯರ ವೃಂದಾವನ ಸನ್ನಿಧಿಯ ವೈಶಿಷ್ಟ್ಯ ಇದು.‌


ಪ್ರಸ್ತುತ ಸುಂದರವಾಗಿ ನವೀಕೃತಗೊಂಡು ಕಂಗೊಳಿಸುತ್ತಿರುವ ಈ ಸನ್ನಿಧಿ ಉಡುಪಿಯ ಎರಡನೇ ಅತೀ ಪ್ರಾಚೀನ (ಮೊದಲನೆಯದು ಉಡುಪಿ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಮಠ) ಗುರುರಾಯರ ಸನ್ನಿಧಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಶ್ರೀ ರಾಘವೇಂದ್ರ ಗುರವೇ ನಮೋ ಅತ್ಯಂತ ದಯಾಲವೇ.


ಉಡುಪಿಯ ಎರಡನೇ ಅತೀ ಪ್ರಾಚೀನವಾದ (85 ವರ್ಷ) ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಸ್ವಗೃಹ ಅಂಬಲಪಾಡಿಯ ಈಶಾವಾಸ್ಯಮ್ ನ ಆವರಣದಲ್ಲಿರುವ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ನವೀಕೃತ ವೃಂದಾವನ ಸನ್ನಿಧಿಯಲ್ಲಿ ಗುರುರಾಯರ 350 ನೇ ಆರಾಧನೋತ್ಸವದ ಅಂಗವಾಗಿ ಮಧ್ಯಾರಾಧನೆಯು ಮಂಗಳವಾರ ಸರಳ ವೈಭವದೊಂದಿಗೆ ನೆರವೇರಿತು.‌


-ಜಿ ವಾಸುದೇವ ಭಟ್ ಪೆರಂಪಳ್ಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post