ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೈಕ್ ಗೆ ಆ್ಯಂಬುಲೆನ್ಸ್ ಡಿಕ್ಕಿ ;ಬೈಕ್ ಸವಾರ ಗಂಭೀರ

ಬೈಕ್ ಗೆ ಆ್ಯಂಬುಲೆನ್ಸ್ ಡಿಕ್ಕಿ ;ಬೈಕ್ ಸವಾರ ಗಂಭೀರ

 



ಮೈಸೂರು: ಬೈಕ್​ಗೆ ಆ್ಯಂಬುಲೆನ್ಸ್​ ​ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆಯೊಂದು ಮೈಸೂರು ಕೆಆರ್​ಎಸ್ ರಸ್ತೆಯಲ್ಲಿ ನಡೆದಿದೆ.


ಖಾಸಗಿ ಕಂಪನಿಯ ಸಿಬ್ಬಂದಿಗೆ ಆರೋಗ್ಯ ಸಮಸ್ಯೆ ಕಾರಣ ಅದೇ ಕಂಪನಿಗೆ ಸೇರಿದ ಆ್ಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ.


ಆ್ಯಂಬುಲೆನ್ಸ್ ಚಾಲಕನ ಬದಲು ಸೆಕ್ಯೂರಿಟಿ ಗಾರ್ಡ್​​ ಆ್ಯಂಬುಲೆನ್ಸ್ ಚಲಾಯಿಸಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.


ಮೈಸೂರಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

0 Comments

Post a Comment

Post a Comment (0)

Previous Post Next Post