ಬದಿಯಡ್ಕ: ಕೋವಿಡ್ ಮಾರ್ಗಸೂಚಿ ನೆಪದಲ್ಲಿ ಸರಕಾರ ಕೆಲವೊಂದು ಅಂಗಡಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅನುಮತಿ ನೀಡಿ, ಬಹುತೇಕ ಅಂಗಡಿಗಳನ್ನು ಮುಚ್ಚಿಸಿದ ಕ್ರಮವನ್ನು ಖಂಡಿಸಿ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ಇಂದು ಬೆಳಗ್ಗೆ ಕೇರಳದಾದ್ಯಂತ ಪ್ರತಿಭಟನೆ ನಡೆಸಲಾಯಿತು.
ಬದಿಯಡ್ಕದಲ್ಲೂ ವ್ಯಾಪಾರಿಗಳು ಪ್ರತಿಭಟನೆ, ಮೆರವಣಿಗೆ ನಡೆಸಿದರು. ಕೋವಿಡ್ ಸಂಕಟದ ಪರಿಸ್ಥಿತಿಯಲ್ಲಿ ಎಲ್ಲರ ಆರ್ಥಿಕ ಸ್ಥಿತಿಯೂ ಕುಸಿದಿದ್ದು, ದಿನಸಿ, ತರಕಾರಿ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ ಇತರ ವಿಭಾಗದ ವ್ಯಾಪಾರಿಗಳಿಗೆ ಅವಕಾಶ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
Key Words: Kerala, Kerala Traders Protest, Badiyadka, ಕೇರಳ, ವ್ಯಾಪಾರಿಗಳ ಪ್ರತಿಭಟನೆ, ಬದಿಯಡ್ಕ
Post a Comment