ಕಲಬುರ್ಗಿ: ಕಲಬುರಗಿಯ ಸುಕ್ಷೇತ್ರ ಮುದ್ದಡಗಾ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಪರಮಪೂಜ್ಯ ಶ್ರೀ ಷಡಕ್ಷರಿ ಬ್ರಹ್ಮ ಸದ್ಯೋಜಾತ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಇಂದು (ಜು.11) ಶ್ರೀ ಮಾಧವ ಗೋಶಾಲೆಗೆ ಭೇಟಿ ನೀಡಿ ಅನುಗ್ರಹಿಸಿದರು.
ಸ್ವಾಮೀಜಿಗಳು ಗೋಶಾಲೆ ನಡೆಸುತ್ತಿದ್ದು ಕೇವಲ ಗೋವುಗಳಲ್ಲದೆ ಅನೇಕ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ. ಬಡ ಮಕ್ಕಳಿಗೆ ಜಾತಿ ಭೇದವಿಲ್ಲದೆ ಜ್ಯೋತಿಷ್ಯ, ಆಯುರ್ವೇದ ಇತ್ಯಾದಿ ವೈದಿಕ ಸಂಸ್ಕಾರ ನೀಡುತ್ತಿದ್ದಾರೆ. ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಸ್ಕೃತ ವಿದ್ಯಾಭ್ಯಾಸವನ್ನು ಮುಗಿಸಿರುವ ಪೂಜ್ಯರು ಆಯುರ್ವೇದ ಪಂಡಿತರೂ ಹೌದು.
ಶ್ರೀ ಮಾಧವ ಗೋಶಾಲೆಯಲ್ಲಿ ತಯಾರಿಸಲಾಗುತ್ತಿರುವ ಔಷಧಿ ಹಾಗೂ ಇತರ ಪಂಚಗವ್ಯ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಮಠದ ಗೋಶಾಲೆಯಲ್ಲಿ ಗೋಮೂತ್ರ ಶುದ್ಧೀಕರಿಸುವ ಯಂತ್ರ, ಹಣತೆ, ಧೂಪ ಬತ್ತಿ ಹಾಗು ಗೋಮಯ ಗಣೇಶನ ಮೂರ್ತಿಗಳನ್ನು ತಯಾರಿಸಲು ಅಚ್ಚುಗಳನ್ನು ತರಿಸಿ ಪಂಚಗವ್ಯ ಉತ್ಪನ್ನಗಳನ್ನು ತಯಾರಿಸಲು ನಿಶ್ಚಯಿಸಿದ್ದಾರೆ.
ಇವತ್ತು ಶ್ರೀ ಮಾಧವ ಗೋಶಾಲೆಗೆ ಭೇಟಿ ನೀಡಿದ್ದು ನನಗೆ ತುಂಬಾ ಪ್ರಯೋಜನವಾಗಿದೆ ಎಂದು ಪೂಜ್ಯರು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗೋಶಾಲೆಯಲ್ಲಿ ತಯಾರಿಸಲಾದ ಪಂಚಗವ್ಯ ಉತ್ಪನ್ನಗಳನ್ನು ಪೂಜ್ಯರಿಗೆ ಗೌರವ ಕಾಣಿಕೆಯಾಗಿ ಅರ್ಪಿಸಲಾಯಿತು.
Post a Comment