ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ಸಿಬ್ಬಂದಿ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

ಗೃಹರಕ್ಷಕ ಸಿಬ್ಬಂದಿ ಕುಟುಂಬಕ್ಕೆ ಸಹಾಯಧನ ಹಸ್ತಾಂತರ



ಕಡಬ: ಕಡಬ ಘಟಕ ಗೃಹರಕ್ಷಕ ದಳದ ಸದಸ್ಯರು ಸಂಗ್ರಹಿಸಿ, ಘಟಕದ ಸದಸ್ಯರಾದ ಸಂದೇಶ್ ಇವರಲ್ಲಿ ನೀಡಿದ, ಗೌರವ ಧನ ಸಹಾಯವನ್ನು ಇತ್ತೀಚೆಗೆ ಮೃತಪಟ್ಟ ಗೃಹರಕ್ಷಕ ಸಿಬ್ಬಂದಿ ದಿವಂಗತ ಜನಾರ್ದನ ಗೌಡ ಬಳ್ಳೇರಿ ಇವರ ಕುಟುಂಬಕ್ಕೆ ಇಂದು (ಜು.25) ಹಸ್ತಾಂತರಿಸಲಾಯಿತು.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ, ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಡಾ|| ಮುರಳಿ ಮೋಹನ ಚೂಂತಾರು ಅವರು ಈ ಸಹಾಯಧನವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಸಮದೇಷ್ಟರಾರ ಡಾ|| ಮುರಳಿ ಮೋಹನ ಚೂಂತಾರು, ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಜೀಪ್ ಚಾಲಕರಾದ ದಿವಾಕರ್, ದುಶ್ಯಂತ್ ಕುಮಾರ್, ಕಡಬ ಘಟಕದ ಗೃಹರಕ್ಷಕ ತಿಲಕ್, ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಪಾಲ್ಗೊಂಡಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post