ಪುತ್ತೂರು: ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಐಕ್ಯೂ ಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮ ಪ್ರತಿ ಶನಿವಾರದಂತೆ ಈ ವಾರವು ಆನ್ಲೈನ್ ನಲ್ಲಿ ನಡೆಯಿತು.
ಈ ಸಂದರ್ಭ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ ಆರ್ ನಿಡ್ಪಳ್ಳಿ ಮತ್ತು ಸೀಮಾ ಪೋನಡ್ಕ ಹಾಗೂ ಕಾರ್ಯಕ್ರಮದ ಕಾರ್ಯದರ್ಶಿ ಸೌಜನ್ಯ ಬಿ ಎಂ ಕೆಯ್ಯೂರು ಉಪಸ್ಥಿತರಿದ್ದರು.
'ಗುರಿ ತೋರೊ ಗುರುವಿಗೊಂದು ನಮನ' ಎಂಬ ವಿಷಯದ ಕುರಿತು ಶಶಿಧರ್, ನಿರೀಕ್ಷಾ, ತನುಶ್ರೀ, ಶುಭ್ರ, ಕಾರ್ತಿಕ್ ಪೈ, ಸೌಜನ್ಯ ಬಿ.ಎಂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ತಿಕ್ ಪೈ ವಾರದ ಉತ್ತಮ ಮಾತುಗಾರರಾಗಿ ಮತ್ತು ಪ್ರಥಮ ಪತ್ರಿಕೋದ್ಯಮ ವಿಭಾಗ ಉತ್ತಮ ಮಾತುಗಾರರ ತಂಡವಾಗಿ ಬಹುಮಾನ ಪಡೆದುಕೊಂಡಿತು.
ವಿದ್ಯಾರ್ಥಿಗಳಾದ ಶಶಿಧರ್ ಸ್ವಾಗತಿಸಿ, ಶ್ರಾವ್ಯ ವಂದಿಸಿದರು, ಬೃಂದಾ ಕಾರ್ಯಕ್ರಮವನ್ನು ನಿರೂಪಿಸಿದರು.
Post a Comment