ನವದೆಹಲಿ : ಭಾರಿ ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳ ಆಭ್ಯರ್ಥಿಗಳಿಗೆ ಜೆಇಇ ಮೇನ್ 2021 (JEE Main 2021 )ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಮತ್ತೊಂದು ಅವಕಾಶ ನೀಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.
ಟ್ವೀಟ್ ಮೂಲಕ ಘೋಷಿಸಿದ ಸಚಿವರು, 'ಕೊಲ್ಹಾಪುರ, ಪಾಲ್ಘರ್, ರತ್ನಗಿರಿ, ರಾಯಗಢ, ಸಿಂಧುದುರ್ಗ, ಸಾಂಗ್ಲಿ, ಮತ್ತು ಸತಾರಾದ ವಿದ್ಯಾರ್ಥಿಗಳು ಜೆಇಇ (ಮುಖ್ಯ)-2021 ಸೆಷನ್ 3 ಗಾಗಿ 25 ಮತ್ತು 27 ಜುಲೈ 2021 ರಂದು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದವರು ಭಯಪಡುವಂತಿಲ್ಲ.
ಅಂತಹ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುವುದು, ಮತ್ತು ದಿನಾಂಕಗಳನ್ನ ಎನ್ ಟಿಎ ಶೀಘ್ರದಲ್ಲೇ ಘೋಷಿಸುತ್ತದೆ' ಎಂದಿದ್ದಾರೆ.
Post a Comment