ಬೈಕಂಪಾಡಿ: ಕೊರೊನಾ ವಿರುದ್ದದ ಹೋರಾಟದಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ, ಎನ್‌ಎನ್‌ಎಂ ಗಳು, ದಾದಿಯರು, ವೈದ್ಯರ ಕೆಲಸ ಜೀವವುಳಿಸುವ ಪುಣ್ಯದ ಕಾರ್ಯವಾಗಿದ್ದು, ಇವರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದು ಮೀನುಗಾರಿಕಾ, ಬಂದರು ಸಚಿವ ಅಂಗಾರ ನುಡಿದರು.
ಅವರು ಬೈಕಂಪಾಡಿ ವಿದ್ಯಾರ್ಥಿ ಸಂಘ, ಜಿಲ್ಲಾಡಳಿತ, ರೆಡ್‌ಕ್ರಾಸ್ ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಲಸಿಕೆ ಮೇಳದಲ್ಲಿ ಭಾಗವಹಿಸಿ ಕೊರೊನಾ ವಾರಿಯರ್‌ಗಳನ್ನು ಸಮ್ಮಾನಿಸಿ ಮಾತನಾಡಿದರು.
ಕೊರೊನಾ ವಿರುದ್ದದ ಹೋರಾಟದಲ್ಲಿ ಮನೆ ಮನೆಗೆ ತೆರಳಿ ಅವರನ್ನು ಗುರುತಿಸಿ ಕೆಲಸ ಮಾಡುವವರು ಕೆಳಸ್ತರದಲ್ಲಿರುವ ಕೊರೊನಾ ವಾರಿಯರ್‌ಗಳ ಶ್ರಮ ಅಪಾರ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಉಚಿತ ಲಸಿಕೆ ವಿತರಣೆ ಘೋಷಿಸಿದರು. ಆದರೆ ಅಪಪ್ರಚಾರದಿಂದ ಸ್ವಲ್ಲ ಹಿನ್ನಡೆ ಆಯಿತು. ಆದರೆ ಇಂದು ರಕ್ಷಣೆಗೆ ಮಾಡುವ ಸಮಯದಲ್ಲಿ ಇಂತಹವುಗಳಿಗೆ ಕಿವಿಗೊಡಬೇಡಿ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲು ಮುಂದಾಗಬೇಕಿದೆ ಎಂದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕೊರೊನಾ ವಾರಿಯರ್‌ಗಳನ್ನು ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್ ಕುಮಾರ್, ರಾಮಚಂದರ್ ಬೈಕಂಪಾಡಿ, ಮನಪಾ ಸದಸ್ಯರಾದ ಸುಮಿತ್ರ ಕರಿಯ, ಸುನಿತ, ರಾಜೇಶ್ ಸಾಲ್ಯಾನ್, ಬೈಕಂಪಾಡಿ ಮೊಗವೀರ ಮಹಾಸಭಾ ಅಧ್ಯಕ್ಷ ವಸಂತ ಅಮೀನ್, ಉಪಾಧ್ಯಕ್ಷ ಎನ್.ಆರ್ ಪುರುಷೋತ್ತಮ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಓಂದಾಸ್, ನವೀನ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment