ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರೊನಾ ನಿಯಂತ್ರಣ: ಉಡುಪಿ ಜಿಲ್ಲಾ ಸಾಧನೆ ಒಂದಿಷ್ಟು ಮಾಹಿತಿ ಬೇಕಾಗಿದೆ

ಕೊರೊನಾ ನಿಯಂತ್ರಣ: ಉಡುಪಿ ಜಿಲ್ಲಾ ಸಾಧನೆ ಒಂದಿಷ್ಟು ಮಾಹಿತಿ ಬೇಕಾಗಿದೆ



ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 6,78,451 ಮಂದಿಗೆ ಕೊರೊನಾ ಪರೀಕ್ಷೆ ಆಗಿದೆ. ಅಂದರೆ ಜಿಲ್ಲೆಯ ಒಟ್ಟು ಜನಸಂಖ್ಯೆ 11,77,361 (2011ರ ಜನಗಣತಿ) ಇದರ ಅಥ೯ಶೇ.50 ಕ್ಕೂ ಮಿಕ್ಕಿ ಕೊರೊನ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ ಸಂತೇೂಷವೇ. ನಿಜಕ್ಕೂ ಆಗಿದೆಯೇ? ಅನ್ನುವುದು ನನ್ನನ್ನು ಕಾಡುವ ಪ್ರಶ್ನೆ.


ಕೊರೊನಾ +ve ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸಂತೇೂಷ ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ ಆಗಿಲ್ಲ. ಪ್ರತಿನಿತ್ಯ 2 ಅಥವಾ 3ಕ್ಕೂ ಮಿಕ್ಕಿ ಸಾವಿನ ಸಂಖ್ಯೆ ತೇೂರಿಸುತ್ತಿದೆ ಮಾಹಿತಿ (ಮಂಗಳೂರಿನಲ್ಲಿ 14). ಇಲ್ಲಿ ನಮ್ಮಂತಹ ಸಾಮಾನ್ಯ ಜನರಿಗೆ ಕಾಡುವ ಬಹುಮುಖ್ಯ ಸಂಶಯ/ ಭಯದ ಪ್ರಶ್ನೆ ಅಂದರೆ ಯಾರೊ ಒಬ್ಬ ವ್ಯಕ್ತಿ ಕೇೂರೊನ ಬಂತು ಅಂದುಕೊಂಡು ಆಸ್ಪತ್ರೆಗೆ ನಡೆದುಕೊಂಡು ಹೇೂಗಿರುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ವಾಪಾಸು ಬರುವಾಗ ಶವವಾಗಿ ಬರುತ್ತಾನೆ!. ಇದು ಬರೇ ಉಡುಪಿ ಜಿಲ್ಲಾ  ಸಮಸ್ಯೆ ಅಲ್ಲ ಎಲ್ಲಾ ಜಿಲ್ಲೆಗಳಲ್ಲಿ ಇದೇ ಕತೆ. ಅಂದರೆ ಇಲ್ಲಿ ಯಾರನ್ನು ಪ್ರಶ್ನೆ  ಮಾಡ ಬೇಕು? ಯಾವುದನ್ನು ಪ್ರಶ್ನೆ ಮಾಡಬೇಕು. ವೆೈದ್ಯರ ಅಸಮಥ೯ತೆಯಾ? ಆಸ್ಪತ್ರೆಯ ಅಸಡ್ಡೆಯಾ? ಕೊರೊನಾದ ಭೀಕರತೆಯಾ? ಒಂದೂ ಅಥ೯ವಾಗುವುದಿಲ್ಲ.


ಈ ನಿಟ್ಟಿನಲ್ಲಿ ಸರಕಾರದ ಜಿಲ್ಲಾಡಳಿತ ಏನಾದರೂ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿದೆಯಾ? ಯಾವ ಯಾವ ಆಸ್ಪತ್ರೆಯಲ್ಲಿ ಕೊರೊನಾ ಸಂಬಂಧಿಸಿದ ಸಾವು ಹೆಚ್ಚು ಸಂಭವಿಸಿವೆ. ನಮ್ಮಲ್ಲಿ ಒಂದು ಪರಿಪಾಠವಿದೆ. ಯಾವುದೇ ರೇೂಗಿ ಬರಲಿ ಮೊದಲಿಗೆ  ಎಡ್ಮಿಟ್ ಮಾಡಿಕೊಂಡು trail & error ಮಾಡುವುದು  ಕೊನೆಗೆ  ಆಗುವುದಿಲ್ಲ ಅನ್ನುವಾಗ ಮಣಿಪಾಲದ ಕಡೆಗೆ ಕೆೈ ಮಾಡುವುದು. ಅಂತೂ ಅವನ ಸಾವು ಮಣಿಪಾಲದಲ್ಲಿ ಆಗಲಿ ನಮ್ಮಲ್ಲಿ ಬೇಡ ಅನ್ನುವ ಮನಸ್ಥಿತಿ. ಈ ಲೆಕ್ಕಾಚಾರ ಬೇಡ. ಕೊರೊನ ಸಾವಿನ ಅಂಕೆ ಸಂಖ್ಯೆಯ ಜೊತೆಗೆ ಆಸ್ಪತ್ರೆಯ ಹೆಸರು ನಮೂದಿಸಿದರೆ ಸಾವಿನ ಸಂಖ್ಯೆಯಾದರೂ ಕಡಿಮೆಯಾದೀತು?


ಈ ಎಲ್ಲಾ ಪ್ರಶ್ನೆಗಳಿಗೆ ಸ್ವಷ್ಟ ಮಾಹಿತಿ ನೀಡಿದರೆ ಜಿಲ್ಲಾಡಳಿತ ಸಾಧನೆಯನ್ನು ಪ್ರತಿಯೊಬ್ಬರ ಮನೆಯಲ್ಲಿ ನೇತಾಡಿಸಬಹುದಿತ್ತೊ ಏನೋ? ನಿಮ್ಮ ಅಭಿಪ್ರಾಯಕ್ಕೂ ಮನ್ನಣೆ ಇದೆ.


-ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post