ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ಸಂಸ್ಕೃತ ಕಾಲೇಜಿನ ಗ್ರಂಥಪಾಲಕ ಹರಿಕೃಷ್ಣ ರಾವ್ ಸಗ್ರಿ ನಿವೃತ್ತಿ

ಉಡುಪಿ: ಸಂಸ್ಕೃತ ಕಾಲೇಜಿನ ಗ್ರಂಥಪಾಲಕ ಹರಿಕೃಷ್ಣ ರಾವ್ ಸಗ್ರಿ ನಿವೃತ್ತಿ


ಉಡುಪಿ: ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 1984 ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ,  ಹರಿಕೃಷ್ಣ ರಾವ್ ಎ ಸಗ್ರಿ ಅವರು, 37 ವರ್ಷಗಳ ಸುದೀರ್ಘ ಸೇವೆಯಿಂದ ಕಳೆದ ತಿಂಗಳು ನಿವೃತ್ತರಾದರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಿಂದ ಶಾಸ್ತ್ರದ ಜೊತೆಗೆ ಕನ್ನಡ, ಇಂಗ್ಲಿಷ್, ಮತ್ತು ಇತರ ವಿಷಯಗಳು ಹೊಸ ಕಲಿಕಾ ಪದ್ದತಿಯಲ್ಲಿ ಸೇರಿತು. ಆವಾಗ ಗ್ರಂಥಾಲಯದ ನಿರ್ವಹಣೆಯೊಂದಿಗೆ ಕನ್ನಡ, ಇಂಗ್ಲಿಷ್, ಪರಿಸರ ಅಧ್ಯಯನ ಮತ್ತು ಇತಿಹಾಸದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಸಗ್ರಿ ಅವರು  ಪಾಠ ಮಾಡಿರುವರು. ಅಲ್ಲದೇ ಪ್ರಾರಂಭದ ಎನ್ ಎಸ್ ಎಸ್ ಘಟಕ ವನ್ನು ಸಂಯೋಜನಾಧಿಕಾರಿಯಾಗಿ ಸಂಸ್ಕೃತ ಕಾಲೇಜಿನಲ್ಲಿ ಮುನ್ನಡೆಸಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಪಡೆದಿರುವರು.  


ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಭಕ್ತರಾಗಿರುವ ಹರಿಕೃಷ್ಣ ರಾವ್ ಸಗ್ರಿ ಅವರು, ಉಡುಪಿಯ ನಿತ್ಯಾನಂದ ಮಂದಿರ ಮಠದ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಅಲ್ಲಿ  ನಡೆಯುವ ಸತ್ಸಂಗದಲ್ಲಿ ಪ್ರವಚನಗಳಲ್ಲಿ ಭಾಗಿಗಳಾಗುತ್ತಿದ್ದರು.


ಸಾಹಿತಿಯಾಗಿರುವ ಸಗ್ರಿ ಅವರು, ಮೂಲತಃ ಕಾಸರಗೋಡು ಜಿಲ್ಲೆಯ ಅಡೂರಿನವರು. ಕನ್ನಡದ ನಿಯತ ಕಾಲಿಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆಯುತ್ತಿದ್ದರು. ಹಲವಾರು ಪುಸ್ತಕಗಳು ಇವರ ಲೇಖನಿಯಿಂದ ಮೂಡಿಬಂದಿವೆ. ಆಂಗ್ಲ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post