ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳುನಾಡ ರಕ್ಷಣಾ ವೇದಿಕೆ ಆಹಾರ ಮತ್ತು ಪಡಿತರ ಕಿಟ್ ವಿತರಣೆ 52 ನೇ ದಿನಕ್ಕೆ

ತುಳುನಾಡ ರಕ್ಷಣಾ ವೇದಿಕೆ ಆಹಾರ ಮತ್ತು ಪಡಿತರ ಕಿಟ್ ವಿತರಣೆ 52 ನೇ ದಿನಕ್ಕೆ

 'ಹಸಿವೆಗೆ ಅನ್ನ ನೀಡುವುದು ನಿಜವಾದ ಮಾನವ ಸೇವೆ': ಭಾಸ್ಕರ ರೈ ಕುಕ್ಕುವಳ್ಳಿ


ಮಂಗಳೂರು: 'ಸಮಾಜ ಸೇವೆಗೆ ವಿವಿಧ ಮುಖಗಳು. ಕಷ್ಟ ಕಾರ್ಪಣ್ಯಗಳಿಗೆ ಆಸರೆಯಾಗುವುದರೊಂದಿಗೆ ಸಂತ್ರಸ್ತರಾದವರಲ್ಲಿ ಆತ್ಮ ಸ್ಥೈರ್ಯ ಮೂಡಿಸುವುದೂ ಸಮಾಜಮುಖೀ ಕಾರ್ಯವೆನಿಸುತ್ತದೆ' ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಕೋವಿಡ್ ಸಂತ್ರಸ್ತರಿಗಾಗಿ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅನ್ನದಾನದ 52 ನೇ ದಿನದ ಕಾರ್ಯಕ್ರಮದ ಅಂಗವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಆಹಾರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. 


'ಕೋವಿಡ್ ಮಹಾಮಾರಿಯಿಂದಾಗಿ ಅನ್ನಾಹಾರವಿಲ್ಲದೆ ಪರದಾಡುತ್ತಿರುವ ದಿಕ್ಕಿಲ್ಲದವರಿಗೆ ಕಳೆದ 52 ದಿನಗಳಿಂದ ನಿರಂತರ ರುಚಿಕಟ್ಟಾದ ಆಹಾರ ಮತ್ತು ಪಡಿತರ ಕಿಟ್ ವಿತರಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯ ಇತರಿಗೆ ಮಾದರಿಯಾದುದು. ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ ಕಾರ್ಯ. ಇದು ನಿಜವಾದ ಮಾನವ ಸೇವೆ' ಎಂದವರು ಹೇಳಿದರು.




ಚಿಕನ್ ಮಸಾಲ - ಇಡ್ಲಿ :

ಸಾಮಾಜಿಕ ಹೋರಾಟಗಾರ ಹಾಗೂ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮಾತನಾಡಿ 'ತುರವೇ ಗೌರವಾಧ್ಯಕ್ಷರಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರ ಮಾರ್ಗದರ್ಶನದಲ್ಲಿ ವಿಶೇಷ ಪ್ರೋತ್ಸಾಹ ಸಹಕಾರ ನೀಡುತ್ತಿರುವ  ಫ್ರಾನ್ಸಿಸ್ ರಸ್ಕಿನ್ ರವರ  ನೆರವಿನಿಂದ ಪ್ರತಿ ದಿನದಂತೆ 52 ನೇ ದಿನದ ಅನ್ನದಾನವನ್ನು ಗುರುವಾರ ಕೂಡ ಹಸಿದವರಿಗೆ ಅನ್ನ ಬಡಿಸುವ ಮೂಲಕ ಮಾಡಲಾಗಿದೆ. ಸುಮಾರು 600 ಚಿಕನ್ ಗ್ರೀನ್ ಮಸಾಲ ಇಡ್ಲಿ ಆಹಾರ ಕಿಟ್ ವಿತರಿಸಲಾಯಿತು.ಈ ವರೆಗೆ ಮಂಗಳೂರು ನಗರದಲ್ಲಿ 898 ಪಡಿತರ ಕಿಟ್  ಹಾಗೂ ತುರವೇ ವಿವಿಧ ಘಟಕಗಳು ಸುಮಾರು 2500 ಆಹಾರ ಸಾಮಗ್ರಿ ಕಿಟ್ ಮತ್ತು ಮಂಗಳೂರು ನಗರದಲ್ಲಿ ಅಂದಾಜು ಸುಮಾರು 30,000 ಕ್ಕಿಂತಲೂ ಹೆಚ್ಚು ಆಹಾರ ಕಿಟ್ ವಿತರಿಸಲಾಗಿದೆ' ಎಂದರು.


ಶ್ಲಾಘನೀಯ ಕಾರ್ಯ:

' ಕಳೆದ ಆರೇಳು ವಾರಗಳಿಂದ ದ.ಕ.ಜೆಲ್ಲೆಯಾದ್ಯಂತ ಕೊರೋನಾ ಮುಂಜಾಗ್ರತಾ ಲಾಕ್ ಡೌನ್ ಹೇರಿಕೆಯಿಂದ ಜನರು ಬಹಳ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ  ಕಾಲಘಟ್ಟದಲ್ಲಿ ಕೊರೋನಾ ಮಹಾಮಾರಿ ಉಲ್ಬಣಿಸಿ ಜನರ ಅಮೂಲ್ಯ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ. ಒಂದೆಡೆ ಕೆಲಸವಿಲ್ಲ ; ಇನ್ನೊಂದೆಡೆ ಆಹಾರ ವಸ್ತುಗಳ ಕೊರತೆಯಿಂದ ಅಂಗಡಿಗಳು ಮುಚ್ಚಿದ ಪರಿಸ್ಥಿತಿ, ಹೋಟೆಲ್ ಕೂಡ ಇಲ್ಲದ ಕಾರಣ ವಲಸೆ ಕಾರ್ಮಿಕರು, ಬೀದಿ ಭಿಕ್ಷುಕರು,ತೀರ ಬಡತನದ ನಿತ್ಯ ಕಾರ್ಮಿಕರು ಮೊದಲಾದವರ ಪರಿಸ್ಥಿತಿ ಪಟ್ಟಣಗಳಲ್ಲಿ ಶೋಚನೀಯವಾಗಿದೆ.


ಈ ಹಿನ್ನಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯು ಸಮಾಜ ಸೇವಾ ಕಾರ್ಯದಲ್ಲಿ ತನ್ನ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನಿಟ್ಟು ನಿತ್ಯ ನಿರಂತರ ರಾತ್ರಿ ಹಗಲೆನ್ನದೆ  ನಿರಾಶ್ರಿತರ, ಬಡವರ ಮತ್ತು ಹಸಿವಿನಿಂದ ಕಂಗಲಾಗಿ ಕುಳಿತ ಜನರ ಬಳಿ ಹೋಗಿ ಅವರ ಸೇವೆಯನ್ನು ಮಾಡುತ್ತಾ ಬಂದಿದೆ. ಲಾಕ್‌ ಡೌನ್‌ ಮೊದಲನೇ ದಿನದಿಂದ ಇಂದಿನವರೆಗೂ  ಕಂಕನಾಡಿ, ಕದ್ರಿ, ಬಂದರು, ಉರ್ವಾ, ಹೊಯ್ಗೆ ಬಜಾರ್, ದಕ್ಕೆ, ಬಿಜೈ, ಸುರತ್ಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಉಚಿತ ಆಹಾರ ಮತ್ತು ದಿನಸಿ ಕಿಟ್ ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ' ಎಂದು ಭಾಸ್ಕರ ರೈ ಕುಕ್ಕುವಳ್ಳಿ ವೇದಿಕೆಯ ಸೇವೆಯನ್ನು ಶ್ಲಾಘಿಸಿದರು.


 'ತುರವೇ ಸಂಘಟನೆ ಜಾತಿ ಧರ್ಮ ನೋಡದೆ ಸಹಾಯ ಹಸ್ತ ನೀಡುವ ತನ್ನ ನಿಸ್ಪೃಹ ಕೆಲಸದಿಂದ  ಶ್ಲಾಘನೆಗೆ ಪಾತ್ರವಾಗಿದೆ.,  ಕಾರ್ಯಕರ್ತರ  ಸಮಾಜಮುಖಿ ಕಾರ್ಯಗಳು ಬಡ ಜನರಿಗೆ ಆಸರೆಯಾಗಿದೆ. ಇದೇ ರೀತಿ ಎಲ್ಲ ಸಂಘಟನೆಗಳು ರಸ್ತೆಗೆ ಇಳಿದು ಜನರ ರಕ್ಷಣೆಗಾಗಿ ಕಟಿಬದ್ಧರಾದರೆ ಹಸಿವಿಂದ ಬಳಲುತ್ತಿರುವ ಅದೆಷ್ಟೋ ಜೀವಗಳ ಹಸಿವು ನೀಗುವುದು. ಅಲೆಮಾರಿಗಳು, ಪ್ರವಾಸಿಗರು, ಕಾರ್ಮಿಕರು, ನಿರಾಶ್ರಿತರನ್ನು ಹುಡುಕಿ ಊಟ ನೀಡುವ  ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮತ್ತವರ ಸಂಗಡಿಗರ ಕೆಲಸ ಸ್ತುತ್ಯ. ಜಾತಿ ಧರ್ಮ, ಪಕ್ಷ, ಭಾಷೆ ನೋಡದೆ ಸಹಾಯ ಮಾಡುವ ಈ ಸಂಘಟನೆಗೆ ಜನರು ಬೆಂಬಲ ನೀಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ' ಎಂದವರು ನುಡಿದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post