ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ತನ್ನ ಉಪನ್ಯಾಸ ಮಾಲಿಕೆಯ ಎರಡನೇ ಸಂಚಿಕೆಯ ಪ್ರಯುಕ್ತ ಹೆಸಾರಾಂತ ಪರಿಸರ ಅಧ್ಯಯನ ನಿರತರೂ,ಕಲಾವಿದರೂ ಮತ್ತು ಲೇಖಕರೂ ಆಗಿರುವ ದಿನೇಶ್ ಹೊಳ್ಳ ಅವರಿಂದ 'ಪ್ರಕೃತಿಯ ಪಥದಲ್ಲಿ..!' ಎಂಬ ವಿಷಯದ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಜೂನ್ 26ರ ಶನಿವಾರ ಸಂಜೆ 6 ಗಂಟೆಗೆ ಏರ್ಪಡಿಸಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ತಿನ ಉಪಾಧ್ಯಕ್ಷೆ ಡಾ.ಅರುಣಾ ನಾಗರಾಜ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶೋಕ್ ಪ್ರಸಾದ್ ಭಾಗವಹಿಸುವರು. ಮಂಗಳೂರು ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಸ್ತಾವನೆ ಗೈಯುವರು. ಜನಪ್ರಿಯ ನಿರೂಪಕಿ ಡಾ.ಪ್ರಿಯ ಹರೀಶ್ ನಿರೂಪಣೆ ಮಾಡುವರು.
ವೆಬಿನಾರ್ ನಲ್ಲಿ ಸಭಿಕರಾಗಿ ಭಾಗವಹಿಸುವವರಿಗೆ ಇದೇ ಉಪನ್ಯಾಸವನ್ನು ಆಧರಿಸಿ ಭಾನುವಾರ ಕವಿತಾ ರಚನಾ ಸ್ಪರ್ಧೆ ನಡೆಸಲು ಉದ್ದೇಶಿಸಲಾಗಿದ್ದು ವಿಜೇತರಿಗೆ ನಗದು ಬಹುಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಗೂಗಲ್ ಮೀಟ್ ಅಪ್ಲಿಕೇಶನ್ ನಲ್ಲಿ https://meet.google.com/eyc-qmjj-gjr ಕೊಂಡಿ ಬಳಸಿ ಪಾಲ್ಗೊಳ್ಳಬಹುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment