ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಜಮೀನಿನ ಕೆಲಸಕ್ಕೆ ಹೋದ ಇಬ್ಬರು ಸಹೋದರರಿಗೆ ವಿದ್ಯುತ್ ಶಾಕ್ ತಗುಲಿ, ಇಬ್ಬರು ಸಹೋದರರು ದಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪದ ಬಿ.ಕ್ಯಾಂಪ್ ನ ಸಹೋದರರಾದ ಕುಮಾರ್ ನಾಯ್ಕ್ ಮತ್ತು ಶಂಕರ ನಾಯ್ಕ್ ಎಂಬುವರು ಜಮೀನಿಗೆ ಕೆಲಸ ನಿಮಿತ್ತ ತೆರಳಿದ್ದರು.
ಈ ವೇಳೆಯಲ್ಲಿ ಬೋರ್ ವೆಲ್ ಹತ್ತಿರ ಏನೋ ಕೆಲಸ ಮಾಡಲೆಂದು ಹೋದಾಗ ವಿದ್ಯುತ್ ಪ್ರವಹಿಸಿ, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment