ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ ಕಟ್ಟುವುದಲ್ಲ ಕವನ ಹುಟ್ಟುವುದು: ಡಾ. ಸುರೇಶ ನೆಗಳಗುಳಿ

ಕವನ ಕಟ್ಟುವುದಲ್ಲ ಕವನ ಹುಟ್ಟುವುದು: ಡಾ. ಸುರೇಶ ನೆಗಳಗುಳಿ

ಕವಿ ಸಿದ್ಧಲಿಂಗಯ್ಯ ಅವರಿಗೆ 'ನುಡಿ ನಮನ' ಕವಿಗೋಷ್ಠಿ



ಬೆಂಗಳೂರು: ದಿವಂಗತ ಸಿದ್ಧಲಿಂಗಯ್ಯ ಅವರ ಸಾಹಿತ್ಯ, ಹೋರಾಟ ಎಲ್ಲವು ಆಧುನಿಕ ಜಗತ್ತಿಗೆ ಮಾದರಿಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯೆ, ಲೇಖಕಿ, ಪ್ರಾಧ್ಯಾಪಕಿ ಡಾ. ಪದ್ಮಿನಿ ನಾಗರಾಜು ಅಭಿಪ್ರಾಯ ಪಟ್ಟರು.


ಅವರು, ದಿವಂಗತ ದಲಿತ ಕವಿ ನಾಡೋಜ ಡಾ: ಸಿದ್ಧಲಿಂಗಯ್ಯ ಅವರ ಸ್ಮರಣಾರ್ಥ ಖಿದ್ಮಾ ಫೌಂಡೇಶನ್ ಕರ್ನಾಟಕ ಅಯೋಜಿಸಿದ್ದ ಅಂತರ್ಜಾಲ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.  


ಕವಿ, ನಾಟಕಕಾರ ಡಾ. ಬೇಲೂರು ರಘುನಂದನ್ ಬೆಂಗಳೂರು ಹಾಗೂ ಸಮಾಜ ಸೇವಕ ಡಾ. ನಂದಿ ಭಾಷ ಶುಭನುಡಿಗಳನ್ನಾಡಿದರು.


ಮಂಗಳೂರಿನ ವೈದ್ಯ ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದು,  ಕವನ ಕಟ್ಟುವುದಲ್ಲ ಕವನ ಹುಟ್ಟುವುದು. ನವಿರಾದ ಭಾವಗಳು ಮನವ ಮುಟ್ಟುವುದು.ಎಂದರು. ಅಗಲಿದ ಕವಿ ನಾಡೋಜ‌ ಅವರ ಗುಣ ವಿಶೇಷಣಗಳನ್ನು ವಿಶ್ಲೇಷಿಸಿದರು. ಅವರ ಸಂಪೂರ್ಣ ಪರಿಚಯ ನೀಡುವ ಉಪಮಾ ಸಹಿತವಾದ ಸ್ವರಚಿತ ಗಜ಼ಲ್ ವಾಚಿಸಿದರು.‌


ಮುಂದುವರಿದು ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳ ಬಗ್ಗೆ ಹಾಗೂ ವಾಚಿಸುವ ವಿಧಾನ, ಕಾಗುಣಿತ, ವ್ಯಾಕರಣ, ವಿಭಕ್ತಿ ಪ್ರತ್ಯಯಗಳ ಪ್ರಾಮುಖ್ಯತೆ ಮತ್ತು ಉಚ್ಛಾರ ಶುದ್ಧಿಯ ಅಗತ್ಯವನ್ನೂ ತಿಳಿ ಹೇಳಿದರು. ಜಾಲತಾಣ ಸಾಹಿತ್ಯದ ಸಾಧಕ ಬಾಧಕಗಳನ್ನೂ ಅವರು ಈ ನಡುವೆ ವಿಶ್ಲೇಷಿಸಿ ಸುಲಭದ ಪ್ರಶಸ್ತಿಗಳಿಗೆ ಆತ್ಮರತಿಗೊಳಗಾಗಿ ಸಾಹಿತ್ಯಾಭ್ಯಾಸ ಕೈ ಬಿಡಬಾರದು ಎಂದರು.


ಕವಿಗೋಷ್ಠಿಗೆ ಸುಮಾರು 80ಕ್ಕೂ ಮಿಕ್ಕ ಕವಿಗಳು ಹೆಸರು ನೋಂದಾಯಿಸಿದ್ದು, ಕವನ ವಾಚನ ಮಾಡಿದರು. ಸುಮಾರು ನೂರಕ್ಕೂ ಹೆಚ್ಚು ಭಾಗವಹಿಸಿದ್ದರು.


ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಶಿಂ ಬನ್ನೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಸ್ಟಾಗತಿಸಿ, ಕುಮಾರಿ ರಮ್ಯ ಬೆಂಗಳೂರು ವಂದಿಸಿದರು.


0 Comments

Post a Comment

Post a Comment (0)

Previous Post Next Post