ಬೆಂಗಳೂರು : ಕೋವಿಡ್ ವೈರಸ್ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಮತ್ತೆ ಆರಂಭಿಸುವುದಕ್ಕೆ ವಾಹಿನಿ ಮುಂದಾಗಿದೆ ಎಂಬ ಮಾಹಿತಿ ದೊರಕಿದ್ದು, 72 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಸದಸ್ಯರು ಮತ್ತೆ ರೀ- ಎಂಟ್ರಿ ಆಗಲಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ. ಜೂನ್ 20ರಿಂದ ಮತ್ತೆ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
12 ಸ್ಪರ್ಧಿಗಳಿಗೆ ಕ್ವಾರಂಟೈನ್ ಮಾಡಲಾಗುವುದು, ನಂತರ ಅವರು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ.
ಫೆಬ್ರವರಿ 28 ರಿಂದ ಆರಂಭವಾದ ಬಿಗ್ ಬಾಸ್ 78 ದಿನಗಳಿಗೆ ಕೊನೆಗೊಂಡಿತ್ತು, ಜೂನ್ ತಿಂಗಳ ಆಂತ್ಯದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೆ ಆರಂಭವಾಗಲಿದ್ದು, ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಹಾಗೆಯೇ ಬಿಗ್ ಬಾಸ್ ಸ್ಪರ್ಧಿಗಳಾದ ನಿಧಿ ಸುಬ್ಬಯ್ಯ, ಕೆ.ಪಿ. ಅರವಿಂದ್, ದಿವ್ಯಾ ಸುರೇಶ್, ಶಮಂತ್ ಗೌಡ, ರಘು ಗೌಡ, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್ ಮತ್ತೆ ಬಿಗ್ ಬಾಸ್ ಮನೆಗೆ ಮರಳಲಿದ್ದಾರೆ.
Key words: Kannada Bigg Boss seasn 8, Kuccha Sudeep, ಕನ್ನಡ ಬಿಗ್ ಬಾಸ್, ಕಿಚ್ಚ ಸುದೀಪ್, ಕಲರ್ಸ್ ಕನ್ನಡ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment