ಬೆಂಗಳೂರು: ಕನ್ನಡದ ಅಗ್ನಿ ಸಾಕ್ಷಿ ಧಾರಾವಾಹಿ ಸುಮಾರು 6 ವರ್ಷಗಳ ಕಾಲ ಪ್ರಸಾರಗೊಂಡು ಇದೀಗ ಮತ್ತೊಂದು ದಾಖಲೆ ಬರೆಯುತ್ತಿದೆ.
ಎಲ್ಲರ ಮನಗೆದ್ದ ಮೆಗಾ ಸೀರಿಯಲ್ ಆಗಿ ಹೊರ ಹೊಮ್ಮಿದ ಅಗ್ನಿ ಸಾಕ್ಷಿ ಇದೀಗ ಮರಾಠಿ ಭಾಷೆಗೆ ರಿಮೇಕ್ ಆಗಿ ಪ್ರಸಾರಗೊಳ್ಳಲು ಸಿದ್ಧತೆ ನಡೆಸಿದೆ.
ಎಲ್ಲರ ಮನೆ ಮಾತಾಗಿದ್ದ ಅಗ್ನಿ ಸಾಕ್ಷಿ ಬಹುಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಟಿ.ಆರ್.ಪಿಯಲ್ಲೂ ಮೇಲುಗೈ ಸಾಧಿಸಿತ್ತು.
ನಟ ವಿಜಯ ಸೂರ್ಯ ಹಾಗೂ ನಟಿ ವೈಷ್ಣವಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟ ಕೀರ್ತಿ ಅಗ್ನಿಸಾಕ್ಷಿಗೆ ಸಲ್ಲುತ್ತದೆ.
ಕಳೆದ ವರ್ಷ ಮುಕ್ತಾಯಗೊಂಡ ಅಗ್ನಿಸಾಕ್ಷಿ ಇದೀಗ ಮರಾಠಿ ಭಾಷೆಯಲ್ಲಿ ತೆರೆ ಕಾಣುತ್ತಿದೆ.
ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಧಾರಾವಾಹಿ ಎನ್ನಿಸಿಕೊಂಡ ಅಗ್ನಿಸಾಕ್ಷಿ ಮರಾಠಿಯಲ್ಲಿ ಸೋನಾಚಿ ಪಾವಲೆ ಹೆಸರಿನೊಂದಿಗೆ ಜುಲೈ 5 ರಿಂದು ಪ್ರಸಾರವಾಗಲಿದೆ.
ಆದಿತ್ಯಾ ಧ್ರುವ ಹಾಗೂ ಜ್ಯೋತಿ ನಿಮ್ಮ ಹೊಸ ಪ್ರತಿಭೆಗಳು ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
Post a Comment