ಹುಬ್ಬಳ್ಳಿ: ವಾಹನ ಚಾಲನೆ ಮಾಡುವಾಗ ಚಾಲಕನಿಗೆ ಮೂರ್ಛೆ ರೋಗ ಬಂದು ಸರಣಿ ಅಪಘಾತ ಸಂಭವಿಸಿದ ಘಟನೆಯೊಂದು ಹುಬ್ಬಳ್ಳಿ ಏರ್ಪೋರ್ಟ್ ಬಳಿ ನಡೆದಿದೆ.
ಪಾಲಿಕೆ ಕಸ ಸಂಗ್ರಹಿಸುವ ವಾಹನ ಚಾಲಕನಿಗೆ ವಾಹನ ಚಾಲನೆ ಮಾಡುವಾಗಲೇ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ಇದರಿಂದ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕದಲ್ಲಿದ್ದ ಬೈಕ್ಗಳಿಗೆ ಡಿಕ್ಕಿಯಾಗಿದೆ.
ಈ ಘಟನೆಯಲ್ಲಿ ಎಂಟು ಬೈಕ್ಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಬೈಕ್ ಬಳಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment