ಪುತ್ತೂರು: ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟ ಗೃಹರಕ್ಷಕ ದಳ ಸಿಬ್ಬಂದಿ ಜಗದೀಶ್ ಹೆಗ್ಡೆ ಅವರ ಮನೆಗೆ ತೆರಳಿ ಅವರ ಕುಟುಂದವರಿಗೆ ಪರಿಹಾರಧನ ನೀಡಿ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ದಿವಂಗತ ಜಗದೀಶ್ ಹೆಗ್ಡೆ ಅವರ ಪತ್ನಿ ಹೊನ್ನಮ್ಮ, 8ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿ ದಿಶಾ ಹೆಗ್ಡೆ ಹಾಗೂ 8 ತಿಂಗಳ ಹಸುಗೂಸು ಹಾರ್ದಿಕ್ ಹೆಗ್ಡೆ ಅವರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಘಟಕದ ಅಧಿಕಾರಿ ಅಭಿಮನ್ಯು ರೈ ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment