ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಸರದ ಸಮತೋಲನಕ್ಕಾಗಿ ಜೀವಲಜಾಲಗಳ ಸಂರಕ್ಷಣೆ ಅನಿವಾರ್ಯ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್

ಪರಿಸರದ ಸಮತೋಲನಕ್ಕಾಗಿ ಜೀವಲಜಾಲಗಳ ಸಂರಕ್ಷಣೆ ಅನಿವಾರ್ಯ: ಪ್ರೊ. ಶ್ರೀಕೃಷ್ಣ ಗಣರಾಜ ಭಟ್



 ಪುತ್ತೂರು : ವಿಶಿಷ್ಟ ವಿಸ್ಮಯಗಳ ತವರು ಸಕಲ ಜೀವರಾಶಿಯ ಒಡಲೂ ಆದ ಭೂಮಿಯು ಹಲವು ಶತಮಾನಗಳಿಂದ ವ್ಯಾಪಕವಾಗಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. ಇಂದು ನೈಸರ್ಗಿಕ ಸಂಪನ್ಮೂಲಗಳು ಜೀವ ಜಾಲಗಳು ಅಳಿವಿನಂಚಿನಲ್ಲಿವೆ. ಇದೀಗ ಪರಿಸರದಲ್ಲಿ ಸಮತೋಲನವನ್ನು ಕಾಪಾಡಲು ಅವುಗಳ ಸಂರಕ್ಷಣೆ ತೀವ್ರ ಅಗತ್ಯವಾಗಿ ಪರಿಣಮಿಸಿದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀ ಕೃಷ್ಣ ಗಣರಾಜ ಭಟ್ ಹೇಳಿದರು.


ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ  ಪರಿಸರ ವ್ಯವಸ್ಥೆಯ ಪುನಃ ಸ್ಥಾಪನೆ ವಿಷಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನು  ವಿಶ್ವ ಪರಿಸರ ದಿನಾಚರಣೆಯಂದು  ನಡೆಸಲಾಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಸಹಾಯಕ ಪ್ರಾಚಾರ್ಯರು ಆದ ಪ್ರೊಫೆಸರ್ ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ ಪರಿಸರ ಮರುನಿರ್ಮಾಣದ ಪ್ರಾಮುಖ್ಯತೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ವಿಷ್ಣು ಗಣಪತಿ ಭಟ್, ನೇಚರ್ ಕ್ಲಬ್ ನ ಸಂಚಾಲಕರಾದ  ಡಾ.ಸ್ಮಿತಾ ಪಿ ಜಿ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಈಶ್ವರ ಪ್ರಸಾದ್ ಹಾಗೂ ಕಾಲೇಜಿನ ಇತರ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಅಪೇಕ್ಷಾ ಕಾರ್ಯಕ್ರಮವನ್ನು ಪ್ರಾರ್ಥಿಸಿ, ಮೋನಿಷಾ ಸ್ವಾಗತಿಸಿದರು. ಸಿಂಚನಾ ಯು ಬಿ ವಂದಿಸಿ, ಸುಶ್ಮಿತಾ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post