ಚಿಕ್ಕಮಗಳೂರು: ಅಪ್ರಾಪ್ತ ಬಾಲಕನನ್ನು 20 ವರ್ಷದ ಯುವತಿಯೊಬ್ಬಳು ಮದುವೆಯಾದ ಘಟನೆಯೊಂದು ನಡೆದಿದೆ. ಇದೀಗ ಆಕೆಯ ವಿರುದ್ಧ ಕೇಸ್ ದಾಖಲಾಗಿದೆ.
20 ವರ್ಷದ ಯುವತಿ ಬೆಂಗಳೂರಿನಲ್ಲಿದ್ದು ಫೇಸ್‌ಬುಕ್ ಮೂಲಕ 17 ವರ್ಷದ ಬಾಲಕನ ಪರಿಚಯವಾಗಿತ್ತು.
ಉಭಯ ಕುಟುಂಬದವರಿಗೆ ಒಪ್ಪಿಗೆಯಾದ ಬಳಿಕ ಕಡೂರು ತಾಲೂಕು ಬಿಸಿಲೇಹಳ್ಳಿ ಗ್ರಾ.ಪಂ ನ ಬ್ರಹ್ಮಸಮುದ್ರ ಗ್ರಾಮ ದ ಬಾಲಕನ ಮನೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಜೂ.16ರಂದು ವಿವಾಹ ಕಾರ್ಯಕ್ರಮ ನಡೆಯಿತು.
ಈ ಬಗ್ಗೆ ಜೂ.23 ರಂದು ಮಕ್ಕಳ ಸಹಾಯವಾಣಿ 1098ರ ಮೂಲಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಮಾಹಿತಿ ತಿಳಿದು, ಪೊಲೀಸರ ಜತೆಗೆ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಗ್ರಾಪಂ ಕಾರ್ಯದರ್ಶಿ ಇಂದ್ರಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಅವರು ಯುವತಿಯನ್ನು ವಶಕ್ಕೆ ಪಡೆದರು.
ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ, ಕೋವಿಡ್ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಯುವತಿಯನ್ನು ಇದೀಗ ಚಿಕ್ಕಮಗಳೂರಿನ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment