ಶಿವಮೊಗ್ಗ: ದೆಹಲಿಯಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದ ಕನ್ನಡಿಗರ ಸಮಸ್ಯೆಗೆ ಸಂಸದ ಬಿ.ವೈ.ರಾಘವೇಂದ್ರ ಸ್ಪಂಧಿಸಿ ಮಾನವೀಯತೆ ಮೆರೆದಿದ್ದಾರೆ. ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾದವರಿಗೆ ಬೇಕಾದ ಮೆಡಿಸಿನ್ ಒದಗಿಸುವ ಮೂಲಕ ಸೋಂಕಿತರ ನೆರವಿಗೆ ಸಂಸದರು ಧಾವಿಸಿದ್ದಾರೆ.
ವಿಸಿ-ಶಿವಮೊಗ್ಗದ ರಚನ ಎಂಬ ಟೆಕ್ಕಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಗಂಡನ ಮನೆ ದೆಹಲಿಯಲ್ಲಿ ನೆಲೆಸಿದೆ. ದೆಹಲಿಯಲ್ಲಿನ ಪತಿಯ ಸಹೋದರನಿಗೆ ಇತ್ತೀಚೆಗೆ ಸೋಂಕು ಕಂಡು ಬಂದಿತ್ತು. ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ಪಡೆದು ಮನೆಗ ಬಂದ ರಚನಾರವರ ಭಾವರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿತ್ತು. ಇವರಿಗೆ ಈ ಫಂಗಸ್ ನ ಚಿಕಿತ್ಸೆಗೆ ಮೆಡಿಸಿನ್ ಒದಗಿಸುವುದು ಬಹಳ ಕಷ್ಟದ ಮಾತಾಗಿತ್ತು. ಇವರ ನೆರವಿಗೆ ಸಂಸದ ಬಿ.ವೈ.ರಾಘವೇಂದ್ರ ನೆರವಾಗಿದ್ದಾರೆ.
ಲೈಫೋಜೋ಼ಮಲ್ ಆಂಪೋಟೆರಿಸಂಬಿ ಮೆಡಿಸಿನ್ ಈ ಫಂಗಸ್ ಗೆ ಅಗತ್ಯವಾಗಿತ್ತು. ಅದನ್ನ ಸಂಸದ ಬಿ.ವೈ.ರಾಘವೇಂದ್ರ ಪೂರೈಸಿದ್ದಾರೆ. 49 ವೈಯಲ್ಸ್ ಗಳನ್ನು ದೇಶದ ವಿವಿಧೆಡೆಗಳಿಂದ ಒದಗಿಸಿದ ಕೀರ್ತಿ ಸಂಸದ ಬಿ.ವೈ.ರಾಘವೇಂದ್ರರವರಿಗೆ ಲಭಿಸಿದೆ. ಇದರಿಂದ ಫಂಗಸ್ ನ ಸೋಂಕಿತರು ಗುಣಮುಖರಾಗಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment