ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ʼಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲʼ

ʼಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲʼ

ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕ ಕೇಶವ ಮೂರ್ತಿ ಅಭಿಮತ

ವಿವಿ ಕಾಲೇಜು ಆನ್‌ಲೈನ್ ವಿಶೇಷ ಉಪನ್ಯಾಸ




ಮಂಗಳೂರು: ಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡುವುದರಿಂದಲೇ, ರೇಡಿಯೋಗೆ ದೇಶದ ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗಿದೆ, ಎಂದು ಹಾಸನ ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಕೇಶವ ಮೂರ್ತಿ ಹೇಳಿದರು.  


ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆನ್‌ಲೈನ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, 1980 ರ ದಶಕದ ವರೆಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಿದ್ದ ಆಕಾಶವಾಣಿ, ಹೊಸತನಕ್ಕೂ ಒಗ್ಗಿಕೊಂಡಿದೆ. ಯೂ ಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌ ನಲ್ಲಿ ಲಭ್ಯವಿದೆ, ಜೊತೆಗೆ ʼನ್ಯೂಸ್‌ ಆನ್‌ ಏರ್‌ʼ ಅಪ್ಲಿಕೇಶನ್‌ ಮೂಲಕವೂ ಜನಪ್ರಿಯಾಗಿದೆ. ಡಿಜಿಟಲ್ ರೇಡಿಯೊ ಮಾಂಡಿಯಲ್ (ಡಿಆರ್‌ಎಂ) ಕೂಡ ನಿಗದಿತ ನಗರಗಳಲ್ಲಿ ಲಭ್ಯವಿದೆ, ಎಂದರು.  


ಆಕಾಶವಾಣಿಯಲ್ಲಿ ಈಗಾಗಲೇ 27 ವರ್ಷಗಳ ವೃತ್ತಿಜೀವನ ಪೂರೈಸಿರುವ ಶ್ರೀಯುತರು, ರೇಡಿಯೋ, ʼಗ್ರಾಮ ದರ್ಶನʼ, ʼಕೃಷಿ ದಿಗ್ಗಜರುʼ, ʼಬದುಕು- ಬೇಸಾಯʼ ಮೊದಲಾದ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ, ವಿಶೇಷವಾಗಿ ರೈತರಿಗೆ ಹತ್ತಿರವಾದ ಬಗೆಯನ್ನು ಎಳೆಎಳೆಯಾಗಿ ವಿವರಿಸಿದರು. ಅಲ್ಲದೆ ವಿದ್ಯುತ್‌ ಕಂಬಗಳಲ್ಲಿ, ಸೋಲಾರ್‌ ಮೂಲಕ ಕಾರ್ಯನಿರ್ವಹಿಸುವ ಸ್ವಯಂಚಾಲಿತ ರೇಡಿಯೋ ಯೋಜನೆ- ʼಅರಿವಿನ ದೀಪʼ ಕುರಿತು ಭರವಸೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲೂ ಪಾಲ್ಗೊಂಡರು.  


ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


Key Words: AIR, Akashvani, University College Mangalore, UCM webinar, All India Radio, ಆಕಾಶವಾಣಿ, ವಿವಿ ಕಾಲೇಜು ಮಂಗಳೂರು

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post