ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮರಕಡ ವಾರ್ಡಿನಲ್ಲಿ ಕೃಷಿ ಸಚಿವರಿಂದ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನಕ್ಕೆ ಚಾಲನೆ

ಮರಕಡ ವಾರ್ಡಿನಲ್ಲಿ ಕೃಷಿ ಸಚಿವರಿಂದ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನಕ್ಕೆ ಚಾಲನೆ

ಶಾಸಕ ಡಾ.ಭರತ್ ಶೆಟ್ಟಿ ಸಾಥ್



ಕುಂಜತ್ತಬೈಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕುಂಜತ್ತಬೈಲ್ ಪ್ರದೇಶದ ಮರಕಡ ವಾರ್ಡಿನ ದಿ. ಕಾಂತಣ್ಣ ಶೆಟ್ಟಿ ಕೊಂರ್ಗಿಬೈಲ್ ಇವರ ಹಡೀಲು ಬಿಟ್ಟ ಜಮೀನಿನಲ್ಲಿ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನದ ಅಂಗವಾಗಿ ರಾಜ್ಯದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಯಾಂತ್ರೀಕೃತ ಭತ್ತದ ಕೃಷಿ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಭಾಜಪಾ ಉತ್ತರ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಉಪಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಲೋಹಿತ್ ಅಮೀನ್, ಕಿರಣ್ ಕೋಡಿಕಲ್, ಕೃಷಿ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post