ಹಾಸನ: ಕಾಂಗ್ರೆಸ್ ಬಿಜೆಪಿ ರೌಡಿ ಶೀಟರ್ ಮತ್ತು ಕೊಲೆಗೆಡುಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಬೇಲೂರು ವಿಧಾನಸಭೆ ಮತಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರ ನಡುವೆ ಕಲಹ ಶುರುವಾಗಿದೆ. ಭಾಗದ ಹಿರಿಯ ಮುಖಂಡ ರಾಯಪುರ ಶಿವಣ್ಣ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರನ್ನು ನೀಡಿ ಅದೇ ಸಂಗತಿಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಈ ಕಲಹದಲ್ಲಿ ಸಿದ್ದರಾಮಯ್ಯನವರ ನಿಂದನೆಯೂ ನಡೆದಿದೆ. ಬೇಲೂರಿನಲ್ಲಿ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ನಡೆಯುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
إرسال تعليق