ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳ ಉಳ್ಳಾಲ ಘಟಕದಲ್ಲಿ ವನಮಹೋತ್ಸವ ಆಚರಣೆ

ಗೃಹರಕ್ಷಕ ದಳ ಉಳ್ಳಾಲ ಘಟಕದಲ್ಲಿ ವನಮಹೋತ್ಸವ ಆಚರಣೆ


ಮಂಗಳೂರು: ಗೃಹರಕ್ಷಕ ದಳದ ಉಳ್ಳಾಲ ಘಟಕದ ವತಿಯಿಂದ ಸೈಂಟ್ ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು ಇಲ್ಲಿ ಮಂಗಳವಾರ (ಜೂ.29) ವನಮಹೋತ್ಸವ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಗೃಹರಕ್ಷಕರಿಗೆ ಗಿಡ ವಿತರಿಸುವುದರ ಜೊತೆಗೆ ವನಮಹೋತ್ಸವ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರ ರಕ್ಷಣಾ ತಂಡದ ವತಿಯಿಂದ ಪ್ರತೀ ವರ್ಷ ವನಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಆಚರಿಸುತ್ತಿದ್ದೇವೆ. ಪ್ರತೀ ವರ್ಷ 15 ಘಟಕಗಳಲ್ಲಿ ಒಬ್ಬ ಗೃಹರಕ್ಷಕನಿಗೆ ಒಂದು ಗಿಡದಂತೆ ಸುಮಾರು 1000 ಗಿಡಗಳನ್ನು ಪ್ರತೀ ವರ್ಷ ನೆಟ್ಟು, ಬೆಳೆಸಿ, ಉಳಿಸುವ ಕೆಲಸ ಮಾಡುವುದರ ಜೊತೆಗೆ ಈ ವರ್ಷವು ಎಲ್ಲಾ ಘಟಕದಲ್ಲಿ ವನಮಹೋತ್ಸವವನ್ನು ಆಚರಿಸಿದ್ದೇವೆ. ಹಾಗೆಯೇ ಉಳ್ಳಾಲ ಘಟಕದಲ್ಲಿ ಸಾಂಕೇತಿಕವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎಂದರು.


ಪರಿಸರವನ್ನು ಉಳಿಸುವಂತಹ ಹೆಚ್ಚಿನ ಜವಾಬ್ದಾರಿ ಎಲ್ಲರಿಗೂ ಇದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಮುಖ್ಯ ಕಾರಣ ಪರಿಸರದ ಮೇಲಿನ ದೌರ್ಜನ್ಯ. ಇದರಿಂದ ಪರಿಸರವನ್ನು ಉಳಿಸಬೇಕು, ಬೆಳೆಸಬೇಕು ಒಟ್ಟಿನಲ್ಲಿ ಜನರಿಗೆ ಮಾದರಿ ಆಗಬೇಕು, ನಾವೆಲ್ಲರು ಸೇರಿ ಗಿಡ ನೆಡೋಣ, ಉಳಿಸೋಣ, ಸದೃಢವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡೋಣ ಎಂದು ನುಡಿದರು.


ಸೈಂಟ್ ಸೆಬಾಸ್ಟಿಯನ್ ಚರ್ಚ್‍ನ ಫಾದರ್ ಆದ ಸಿಪ್ರಿಯನ್ ಪಿಂಟೋ ಇವರು ಮಾತನಾಡಿ, ವನಮಹೋತ್ಸವ ಕಾರ್ಯಕ್ರಮ ಸರಕಾರದಿಂದ ನಡೆಯುತ್ತಾ ಇದೆ ಹಾಗೂ ಅದನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಜಾಗತಿಕ ಜಗತ್‍ಗುರುಗಳಾದ ಫ್ರಾನ್ಸಿಸ್ ನವರು ವಿಶೇಷ ಕಾಳಜಿಯನ್ನು ವಹಿಸಿದ್ದಾರೆ. ಪ್ರತೀ ವರ್ಷ ಜುಲೈ ತಿಂಗಳ ಪ್ರಥಮ ಆದಿತ್ಯವಾರದಂದು ಪರಿಸರದ ದಿನವನ್ನಾಗಿ ನಮ್ಮ ಪವಿತ್ರ ಸಭೆಗೆ  ಬರುವ ಜನರಿಗೆ ಪರಿಸರವನ್ನು ಕಾಪಾಡಬೇಕು ಎಂದು ಚರ್ಚ್‍ನ ಧರ್ಮಾಧ್ಯಕ್ಷರು ನಾಲ್ಕೈದು ವರ್ಷಗಳ ಹಿಂದೆಯೇ ತಿಳಿಸಿದ್ದಾರೆ. ಈಗಿನ ಧರ್ಮಾಧ್ಯಕ್ಷರು ಕೂಡಾ ಪರಿಸರವನ್ನು ರಕ್ಷಿಸುವಂತೆ ಎಚ್ಚರಿಸುವುದಲ್ಲದೇ ಅನೇಕ ಗಿಡಗಳನ್ನು ಪ್ರತಿಯೊಬ್ಬರಿಗೆ ನೀಡಿ ನೆಡಬೇಕು ಹಾಗೂ ಪರಿಸರವನ್ನು ರಕ್ಷಿಸಿ ಉಳಿಸಬೇಕು ಎಂಬ ಸಂದೇಶವನ್ನು ನೀಡುತ್ತಿದ್ದಾರೆ ಎಂದು ನುಡಿದರು.


ಈ ಕಾರ್ಯಕ್ರಮದಲ್ಲಿ ಸೈಂಟ್ ಸೆಬಾಸ್ಟಿಯನ್ ಶಾಲಾ ಶಿಕ್ಷಕಿಯರು ಮತ್ತು ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಅಧೀಕ್ಷಕರಾದ ರತ್ನಾಕರ್, ಉಳ್ಳಾಲ ಘಟಕದ ಘಟಕಾಧಿಕಾರಿ  ಭಾಸ್ಕರ್ ಎಂ, ಗೃಹರಕ್ಷಕರಾದ ಸುನಿಲ್ ಪೂಜಾರಿ, ಪ್ರಸಾದ್ ಸುವರ್ಣ, ಜೀವನ್‍ರಾಜ್ ಡಿ’ಸೋಜ, ಪುಷ್ಪಲತಾ, ಯಶವಂತಿ, ದಿವಾಕರ್, ದುಷ್ಯಂತ್ ರೈ ಮುಂತಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post