ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆ.ಜಿ.ಎಫ್ ತಾತ ಎಂದೇ ಖ್ಯಾತಿ ಪಡೆದ ನಟ ಕೃಷ್ಣೋಜಿ ರಾವ್ ನಿಧನ

ಕೆ.ಜಿ.ಎಫ್ ತಾತ ಎಂದೇ ಖ್ಯಾತಿ ಪಡೆದ ನಟ ಕೃಷ್ಣೋಜಿ ರಾವ್ ನಿಧನ

 


ಬೆಂಗಳೂರು: 'ಕೆ.ಜಿ.ಎಫ್‌ ತಾತ' ಎಂದೇ ಖ್ಯಾತಿ ಪಡೆದಿದ್ದ ನಟ ಕೃಷ್ಣೋಜಿ ರಾವ್(72) ಅವರು ಬುಧವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.


ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದ ಸಮಸ್ಯೆಯ ಕಾರಣ ಆರು ದಿನಗಳ ಹಿಂದೆಯೇ ನಗರದ ಸೀತಾ ಸರ್ಕಲ್‌ ಬಳಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.


ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಮಂಗಳವಾರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು.

ಗುರುವಾರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಅಣ್ಣ ನಾಗೇಂದ್ರ ರಾವ್‌ ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post