ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೋವಿಡ್ ಸಂಕಷ್ಟ: ಸಭಾ ಭವನಗಳ ಮಾಲೀಕರು ಹೀಗೇಕೆ ಮಾಡಬಾರದು?

ಕೋವಿಡ್ ಸಂಕಷ್ಟ: ಸಭಾ ಭವನಗಳ ಮಾಲೀಕರು ಹೀಗೇಕೆ ಮಾಡಬಾರದು?


ಉಡುಪಿ ಜಿಲ್ಲೆಯಲ್ಲಿ ಅದೆಷ್ಟೋ ಸಭಾ ಭವನಗಳಿವೆ. ಆದರೆ ಕೊರೊನದಿಂದಾಗಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲಾಗದೇ ಸಾಕಷ್ಟು ಆರ್ಥಿಕ ತೊಂದರೆಗಳಿಗೂ ಒಳಗಾಗಿವೆ. ಕನಿಷ್ಠಪಕ್ಷ 500 ಮಂದಿಗಾದರೂ ಕೇೂವಿಡ್ ನಿಯಮ ಪಾಲಿಸಿ ಮದುವೆ, ಆರತಕ್ಷತೆ ಮುಂದಾದ ಸಾಮಾಜಿಕ ಕಾಯ೯ಕ್ರಮಗಳನ್ನು ನಡೆಸುವರೇ ಅನುಮತಿ ಕೇೂರಿ ಸರ್ಕಾರವನ್ನು ಯಾಕೆ ಒತ್ತಾಯಿಸ ಬಾರದು? ನಿಮ್ಮ ಮನವಿಗೆ ಅವರು ನೆೈತಿಕವಾಗಿ ಕಾನೂನಾತ್ಮಕವಾಗಿ ತಲೆಬಾಗಲೇಬೇಕು.


ಒಂದು ವೇಳೆ ಇದು ಸಾಧ್ಯವಿಲ್ಲ ಅಂದರೆ ಅವರ ಪಕ್ಷಗಳೇ ಕೇೂವಿಡ್ ನಿಯಮಾವಳಿ  ಪಾಲಿಸದೇ 500ಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ನಡೆಸಿದ ಕಾಯ೯ಕ್ರಮಗಳ ಆಡಿಯೋ ವೀಡಿಯೋ ದಾಖಲೆಯನ್ನೇ ಮುಂದಿಟ್ಟು ಬಿಡಿ. ಆದಕ್ಕೂ ಸಾಧ್ಯವಿಲ್ಲ ಅಂದರೆ ನ್ಯಾಯಾಲಯದಲ್ಲಿ ನೀವು ಪ್ರಶ್ನೆ ಮಾಡಬಹುದು. ಆಗ ಸಾವ೯ತ್ರಿಕವಾಗಿ ಕೊರೊನಾ ರೂಲ್ಸ್‌ಗಳನ್ನು ಅಧಿಕಾರಿಗಳು ಅಳವಡಿಸಬೇಕಾದ ಹೊಣೆಗಾರಿಕೆ ಅಧಿಕಾರಿಗಳಿಗೂ ಪ್ರಾಪ್ತವಾಗುತ್ತದೆ.


ಇದು ನೀವು ಮಾಡದೇ ಹೇೂದರೆ ಇನ್ನೂ ಕೆಲವು ವರುಷ ನಿಮ್ಮ ಸಭಾ ಭವನ ಬಾಗಿಲು ಮುಚ್ಚಿ ಕೊಂಡೇ ಇರಬೇಕಾದ ಪರಿಸ್ಥಿತಿ ಗ್ಯಾರಂಟಿ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಯತ್ನಶೀಲರಾಗಿ ಅನ್ನುವುದು ನನ್ನ ಸಲಹೆ ಅಷ್ಟೇ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post