ಮೈಸೂರು : ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಅವರು (85) ವರ್ಷ ಮೈಸೂರಿನ ಅವರ ಸ್ವಹಗೃಹದಲ್ಲಿ ನಿಧರಾಗಿದ್ದಾರೆ.
ಕನ್ನಡ ವಿವಿ ಕುಲಪತಿಗಳಾಗಿ ಜಾನಪದ ಅಕಾಡೆಮಿ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸಾಹಿತ್ಯದ ವಿವಿದ ಪ್ರಾಕಾರದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ದೇಜಗೌ ಮಾರ್ಗದರ್ಶನದಲ್ಲಿ ಶ್ರೀರಾಮಾಯಣ ದರ್ಶನಂ ಕೃತಿ ಕುರಿತು ಪಿ.ಎಚ್.ಡಿ.ಪದವಿ ಪಡೆದಿದ್ದರು.
ಮೃತರು ಪತ್ನಿ ಕಮಲಮ್ಮ, ಪುತ್ರ ಎಚ್.ಎಲ್.ರವೀಂದ್ರ ಪ್ರಸಾದ್, ಪುತ್ರಿ ಡಾ.ಕಲಾ ಸೇರಿದಂತೆ ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Post a Comment